ಕಥೆಕಸಾಪ ಪುತ್ತೂರು ತಾಲೂಕು ಘಟಕಸುದ್ದಿಹಿಂದಿನ ಕಾರ್ಯಕ್ರಮಗಳು

ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಇದರ ಪದಸ್ವೀಕಾರ ಸಮಾರಂಭ

Kannada Sahithya Parishath Puttur President election

ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಇದರ ನೂತನ ಅಧ್ಯಕ್ಷರ ಪದಸ್ವೀಕಾರ ಸಮಾರಂಭವು  ದಿನಾಂಕ 12-02-2022 ರ ಶನಿವಾರ ಸಾಯಂಕಾಲ 3:30 ಕ್ಕೆ ಸರಿಯಾಗಿ ಪುತ್ತೂರಿನ ಪರ್ಲಡ್ಕದ ಬಾಲವನದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ  ಡಾ.ಶಿವರಾಮ ಕಾರಂತ ಬಯಲು ರಂಗಮಂದಿರದಲ್ಲಿ ನಡೆಯಿತು. 

ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ನೂತನ ಅಧ್ಯಕ್ಶರಾಗಿ ಉದ್ಯಮಿ ಮತ್ತು ಖ್ಯಾತ ಸಾಹಿತಿಗಳು ಆದ ಶ್ರೀ ಪುತ್ತೂರು ಉಮೇಶ್ ನಾಯಕ್ ಆಯ್ಕೆಯಾಗಿದ್ದಾರೆ. ಹಾಗೇನೇ ಗೌರವ ಕಾರ್ಯದರ್ಶಿಗಳಾಗಿ ಶಿಕ್ಷಕಿ ಲೇಖಕಿಯೂ ಆದ ಹರಿಣಿ ಪುತ್ತೂರಾಯ ಮತ್ತು ಡಾ ಪೀಟರ್ ವಿಲ್ಸನ್ ಪ್ರಭಾಕರ್, ಹಾಗೂ ಗೌರವ ಕೋಶಾಧ್ಯಕ್ಷರಾಗಿ ಉದ್ಯಮಿ, ಕಲಾ ಪ್ರೇಮಿ ಡಾ.ಹರ್ಷಕುಮಾರ್ ರೈ ಮಾಡಾವು ಆಯ್ಕೆಯಾಗಿದ್ದಾರೆ. 

ಪುತ್ತೂರು ಉಮೇಶ್ ನಾಯಕ್

ಈ ಸಮಾರಂಭದಲ್ಲಿ ಮಾನ್ಯ ಶಾಸಕರಾದ ಶ್ರೀ ಸಂಜೀವ ಮಠಂದೂರು, ಕಸಾಪ ಜಿಲ್ಲಾಧ್ಯಕ್ಷರಾದ  ಡಾ ಶ್ರೀನಾಥ್ ಎಂ ಪಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ  ಸಮಿತಿ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಪದ ಸ್ವೀಕಾರ ಸಮಾರಂಭದಲ್ಲಿ  ಈ ಹಿಂದೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಶ್ರೀ ಐತಪ್ಪ ನಾಯ್ಕ ರನ್ನು ಅಭಿನಂದಿಸಲಾಯಿತು. 

Kannada Sahithya Parishath Putturu

Leave a comment