ಪುತ್ತೂರು, ಮಾರ್ಚ್ 23 ಹಾಗೂ 24ರಂದು ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆಯುವ ದ. ಕ ಜಿಲ್ಲಾ 26ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಶಸ್ತಿಗೆ ಪುತ್ತೂರಿನ ವಿವೇಕಾನಂದ ಐ.ಎ.ಎಸ್ ಅಧ್ಯಯನ ಕೇಂದ್ರದ ತಜ್ಞ ತರಬೇತುದಾರರಾದ ಶ್ರೀ ದರ್ಶನ್ ಗರ್ತಿಕೆರೆ ಅವರು ಆಯ್ಕೆಗೊಂಡಿರುತ್ತಾರೆ. ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಮೋಹನ್ ಆಳ್ವ ಅವರು ಇವರನ್ನು ಅಭಿನಂದಿಸಲಿದ್ದಾರೆ.
ಇವರು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿವೇಕಾನಂದ ಐ.ಎ.ಎಸ್ ಅಧ್ಯಯನ ಕೇಂದ್ರ ದ ವತಿಯಿಂದ ನಡೆಸಲಾದ ಕನ್ನಡದಲ್ಲೂ ಐ.ಎ.ಎಸ್ ಪರೀಕ್ಷೆ ಬರೆಯಿರಿ ಅಭಿಯಾನದ ಅಡಿಯಲ್ಲಿ ಕಳೆದ ಒಂದು ವರ್ಷದಲ್ಲಿ ಸುಮಾರು 50ಕ್ಕೂ ಅಧಿಕ ಉಚಿತ ಕಾರ್ಯಾಗಾರಗಳನ್ನು ನಡೆಸಿ ಹದಿನೈದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಐ.ಎ.ಎಸ್ ಹಾಗೂ ಐ.ಪಿ.ಎಸ್ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿಯನ್ನು ನೀಡಿ ಜಾಗೃತಿ ಮೂಡಿಸಿರುತ್ತಾರೆ. ಮಾತ್ರವಲ್ಲದೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪ್ರವರ್ತಿತ ಐ.ಎ.ಎಸ್ ದರ್ಶನ ಎಂಬ ಉಚಿತ ಯೂಟ್ಯೂಬ್ ಚಾನೆಲ್ ಮೂಲಕ ಐ.ಎ.ಎಸ್- ಐ.ಪಿ.ಎಸ್ ಪರೀಕ್ಷೆಗಳ ಕುರಿತು ಉಚಿತ ಮಾಹಿತಿ ಹಾಗೂ ತರಗತಿಗಳನ್ನು ನೀಡುತ್ತಿದ್ದಾರೆ. ಇವರು ಮೂಲತಃ. ಹೊಸನಗರ ತಾಲೂಕಿನ ಶಿವಮೊಗ್ಗ ಜಿಲ್ಲೆಯ ಗರ್ತಿಕೆರೆಯ ಶ್ರೀ ಚಂದ್ರಶೇಖರ ಹಾಗೂ ಶ್ರೀಮತಿ ಆಶಾ ಮಗನಾದ ಇವರು ಕಳೆದ ಎರಡು ವರ್ಷಗಳಿಂದ ಪುತ್ತೂರು ವಿವೇಕಾನಂದ ಐ.ಎ.ಎಸ್ ಅಧ್ಯಯನ ಕೇಂದ್ರದಲ್ಲಿ ತಜ್ಞ ತರಬೇತಿದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.