ಡಾ.ರೋಹಿಣಾಕ್ಷ ಶಿರ್ಲಾಲು ಪರಿಚಯ
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿ ಇಲ್ಲಿ ಜಾನಪದ ಶಾಸ್ತ್ರ ಮತ್ತು ಬುಡಕಟ್ಟು ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ.ರೋಹಿಣಾಕ್ಷ ಶಿರ್ಲಾಲು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಶಿರ್ಲಾಲು ಗ್ರಾಮದವರು. ಮಂಗಳೂರು ವಿಶ್ವವಿದ್ಯಾಲಯದಿಂದ ಎಂ ಎ ಪದವಿಯನ್ನು ಹಾಗೂ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿ ಎಚ್ ಡಿ ಪದವಿಯನ್ನು ಪಡೆದಿದ್ದಾರೆ. ಡಾ.ರೋಹಿಣಾಕ್ಷ ಶಿರ್ಲಾಲುರವರು ಲೇಖಕರಾಗಿ ನಾಡಿನ ಬೇರೆ ಬೇರೆ ಪತ್ರಿಕೆಗಳಲ್ಲಿ ವೈಚಾರಿಕ ಬರಹಗಳನ್ನು ಪ್ರಕಟಿಸಿದ್ದಾರೆ.
ಡಾ.ರೋಹಿಣಾಕ್ಷ ಶಿರ್ಲಾಲು ರವರ ಪ್ರಕಟವಾದ ಕೃತಿಗಳು
‘ಸಾಹಿತ್ಯ ವಿಚಾರ’,
’ಕನ್ನಡವೂ ಭಾರತವೂ ಜಗವೆಲ್ಲವೂ ಒಂದೇ’ ,
‘ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ’,
‘ನೆಲದನಿಯ ಶೋಧ’ (ಅಂಕಣ ಬರಹಗಳ ಸಂಕಲನ),
“ಬೆಸುಗೆಯ ಹಾದಿ” (ಅಂಕಣ ಬರಹಗಳ ಸಂಕಲನ),
“ಸಿರಿ ಬೆಳಗು” (ಅಂಕಣ ಬರಹಗಳ ಸಂಕಲನ),
”ಶ್ರೀ ಧರಂಪಾಲ್”.
ಡಾ.ರೋಹಿಣಾಕ್ಷ ಶಿರ್ಲಾಲು ರವರ ಸಾಧನೆಯ ಹಾದಿ
ಡಾ.ರೋಹಿಣಾಕ್ಷ ಶಿರ್ಲಾಲು ರವರು ಕುವೆಂಪು ಭಾಷಾಭಾರತಿ ಪ್ರಾಧಿಕಾರ ನೀಡಿದ 2021ರ “ಕುವೆಂಪು ಹಿರಿಯ ಫೆಲೋಶಿಪ್”ಗೆ ಆಯ್ಕೆಯಾಗಿ “ ಕುವೆಂಪು ಸಾಹಿತ್ಯದಲ್ಲಿ ಪ್ರಕಟಗೊಂಡ ದಾರ್ಶನಿಕತೆ, ಆಧ್ಯಾತ್ಮಿಕತೆ ಮತ್ತು ವೈಚಾರಿಕತೆಯ ಸ್ವರೂಪ ವಿವೇಚನೆ” ವಿಷಯದ ಕುರಿತು ಅಧ್ಯಯನ ನಡೆಸಿರುತ್ತಾರೆ. ರಾಷ್ಟ್ರೋತ್ಥಾನ ಸಂಸ್ಥೆ ನೀಡಿದ ರಾಷ್ಟ್ರೋತ್ಥಾನ ಸಾಹಿತ್ಯ ಫೇಲೋಶಿಪ್ ಗಾಗಿ ಶ್ರೀ ಧರ್ಮಪಾಲ್ ಕುರಿತಾಗಿ ಅಧ್ಯಯನ ನಡೆಸಿರುತ್ತಾರೆ.
ಇವರ ಸಾಹಿತ್ಯ ವಿಚಾರ ಕೃತಿಗೆ 2016ರ ದ. ರಾ. ಬೇಂದ್ರೆ ಗ್ರಂಥ ಪುರಸ್ಕಾರ ಲಭಿಸಿದೆ. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಇವರನ್ನು ಭರವಸೆಯ ಯುವ ಲೇಖಕರೆಂದು ಗುರುತಿಸಿ 2019ರ ಚೊಚ್ಚಲ ”ವಾಗ್ದಾವಿ ಪ್ರಶಸ್ತಿ”ಯನ್ನು ನೀಡಿರುತ್ತದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ ಇವರು, ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯದ ಪ್ರಸಾರಂಗದ ಸಹಾಯಕ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಸ್ತುತ ವಿದ್ಯಾರ್ಥಿ ಪಥ ಮಾಸಿಕ ಪತ್ರಿಕೆಯ ಸಂಪಾದಕರು ಮತ್ತು “ವಿಜಯ ಕರ್ನಾಟಕ” ದಿನಪತ್ರಿಕೆಯಲ್ಲಿ ಕಳೆದ 5 ವರ್ಷಗಳಿಂದ ಸಂವಾದ ಎಂಬ ಅಂಕಣವನ್ನು ಬರೆಯುತ್ತಿದ್ದಾರೆ. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿರುತ್ತಾರೆ.