ಲೇಖಕಿ ಅಕ್ಷತಾ ಶೇಖರ್ ರವರು ಹೊರತಂದಿರುವ ಚಿತ್ರಕಲಾ ಪುಸ್ತಕದಲ್ಲಿ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿರುವ ಮಕ್ಕಳಿಗೆ ಹಾಗೂ ಇತರರಿಗೂ ಸಹಾಯಕವಾಗುವಂತಹ ಸರಕಾರದಿಂದ ನಡೆಸಲ್ಪಡುವ ಪ್ರಾರಂಭದ ಚಿತ್ರಕಲಾ ಪರೀಕ್ಷೆ (ಲೋವರ್ ಗ್ರೇಡ್ ಮತ್ತು ಹೈಯರ್ ಗ್ರೇಡ್) ಪರೀಕ್ಷೆಗೆ ಬೇಕಾಗುವ ವಿಷಯಗಳನ್ನು ಮತ್ತು ಅಭ್ಯಾಸ ಮಾಡುವ ಹಂತಗಳನ್ನು ಎಲ್ಲರಿಗೂ ಸುಲಭವಾಗುವ ರೀತಿಯಲ್ಲಿ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ವಿಶೇಷವಾಗಿ ವಸ್ತು ಚಿತ್ರ, ಸ್ಮರಣ ಚಿತ್ರ, ಪ್ರಕೃತಿ ಚಿತ್ರ, ರೇಖಾ ಗಣಿತ -ಅಕ್ಷರ ಬರವಣಿಗೆ, ಸರಳಗೈ ಚಿತ್ರ, ನಕ್ಷಾ ಚಿತ್ರ ಇವುಗಳ ಬಗ್ಗೆ ಹಂತ ಹಂತವಾಗಿ ತೋರಿಸಲಾಗಿದೆ.
ಚಿತ್ರಕಲಾ ಗ್ರೇಡ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸದುಪಯೋಗವಾಗಲಿ ಎನ್ನುವ ಉದ್ದೇಶದಿಂದ ಈ ಪುಸ್ತಕವನ್ನು ಲೇಖಕರು ಹೊರತಂದಿದ್ದಾರೆ. ನಿವೃತ್ತ ಚಿತ್ರಕಲಾ ಸಹಾಯಕ ನಿರ್ದೇಶಕರಾದ ಜಿ. ಆರ್. ಉಪಾಧ್ಯಾಯರು, ಚಿತ್ರಕಲಾ ಶಿಕ್ಷಕರಾದ ಶ್ರೀ ಪತಿ.ಹೆಚ್.ರಾವ್ ಆಲಂಕಾರು, ಕುರಿಯ ಶಾಲೆಯ ಗಣಿತ ಶಿಕ್ಷಕರಾದ ಕವಿತಾ ಪಿ.ಎನ್ ರವರ ಮಾರ್ಗದರ್ಶನದೊಂದಿಗೆ ಹಾಗೂ ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಶ್ರೀ ಕೆ ಸೇಸಪ್ಪ ರೈ, ಕಾರ್ಯದರ್ಶಿಗಳು, ರಾಮಕುಂಜ ಇವರ ಸಹಕಾರದೊಂದಿಗೆ, ‘ಚಿತ್ರಕಲಾ ಪರೀಕ್ಷಾ ಪುಸ್ತಕ’ ಹೊರಹೊಮ್ಮಿದೆ.
ನಿಮಗೆ ಈ ಕೃತಿ ಬೇಕಿದ್ದಲ್ಲಿ ನೀವು ”ಖರೀದಿಸಿ” ಅನ್ನು ಕ್ಲಿಕ್ ಮಾಡಿ ನೇರವಾಗಿ ”ಚಿತ್ರಕಲಾ ಪರೀಕ್ಷಾ ಪುಸ್ತಕ(Drawing Exam Book)” ಪುಸ್ತಕದ ಲೇಖಕರ ವಾಟ್ಸಾಪ್ ಗೆ ಹೋಗಬಹುದು. ಅಲ್ಲಿ ಅವರನ್ನು ಸಂಪರ್ಕಿಸಿ ನೇರವಾಗಿ ಲೇಖಕರಿಂದಲೇ ಪುಸ್ತಕವನ್ನು ಪಡೆಯಬಹುದು.