ಅಕ್ಷತಾ ಶೇಖರ್ ರವರ ”ತುಳುನಾಡ ದೈವಗಳು’’ ಪುಸ್ತಕದ ಪರಿಚಯ

ಈ ಪುಸ್ತಕದಲ್ಲಿ ತುಳುನಾಡಿನಲ್ಲಿ ಆರಾಧಿಸಲ್ಪಡುವ ದೈವಗಳ ಕುರಿತಾದ ಮಾಹಿತಿಗಳನ್ನು ನೀಡಲು ಲೇಖಕರು ಪ್ರಯತ್ನಿಸಿದ್ದಾರೆ. ವಿವಿಧ ಆಕರಗಳಿಂದ ಅಧಿಕೃತ ಮಾಹಿತಿಗಳನ್ನು ಕಲೆ ಹಾಕಿ, ದೈವ ನರ್ತಕರ ಸಂದರ್ಶನ ಮಾಡಿ, ದೈವಗಳ ಹಿನ್ನೆಲೆ ಮತ್ತು ಇತಿಹಾಸವನ್ನು ಸಂಗ್ರಹಿಸಿ ತುಳುನಾಡಿನ ದೈವಗಳು ಪುಸ್ತಕದಲ್ಲಿ ಮಾಹಿತಿಯನ್ನು ನೀಡಲಾಗಿದೆ. ಪುಸ್ತಕ ರಚನೆಗೆ ಪೂರಕ ಮಾಹಿತಿಗಾಗಿ ದೈವ ನರ್ತಕರಾದ ದೇಜಪ್ಪ ಬಾಚಕೆರೆ, ಮುತ್ತಪ್ಪ ಅಜಲ, ವೆಂಕಪ್ಪ ನಲಿಕೆ ಇವರುಗಳ ಸಂದರ್ಶನ ನಡೆಸಲಾಗಿದ್ದು, ಅವರ ಜೊತೆ ನಡೆಸಿದ ಸಂವಾದದ ವಿವರವನ್ನು ಸಹ ಈ ಪುಸ್ತಕದಲ್ಲಿ ನೀಡಲಾಗಿದೆ.

Tulunada Daivagalu Book

ಪಂಜುರ್ಲಿ, ಮಂತ್ರ ದೇವತೆ, ಕಲ್ಕುಡ-ಕಲ್ಲುರ್ಟಿ, ಕೊರಗಜ್ಜ – ಕೊರಗತನಿಯ ಬೈದೆರ್ಲು, ಧೂಮಾವತಿ (ಜುಮಾದಿ) ಗುಳಿಗ ದೈವಗಳ ಕುರಿತಾದ ಹಿನ್ನೆಲೆಯನ್ನು ನೀಡಲಾಗಿದೆ. ಶ್ರೀ ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು ಧರ್ಮಸ್ಥಳ ಇವರ ಹೊನ್ನುಡಿ ಹಾಗೂ ಗೋಪಾಲ ಶೆಟ್ಟಿ ಕಳಂಜ ವಿಶ್ರಾಂತ ದೈಹಿಕ ಶಿಕ್ಷಣ ಶಿಕ್ಷಕರು ಅವರ ಬೆನ್ನುಡಿ ಹಾಗೂ ಶ್ರೀ ಕೆ ಸೇಸಪ್ಪ ರೈ, ಕಾರ್ಯದರ್ಶಿಗಳು ರಾಮಕುಂಜ ಇವರ ಸಹಕಾರದೊಂದಿಗೆ ‘ತುಳುನಾಡ ದೈವಗಳು’ ಪುಸ್ತಕ ಹೊರಹೊಮ್ಮಿದೆ.

ನಿಮಗೆ ಈ ಕೃತಿ ಬೇಕಿದ್ದಲ್ಲಿ ನೀವು ”ಖರೀದಿಸಿ” ಅನ್ನು ಕ್ಲಿಕ್ ಮಾಡಿ ನೇರವಾಗಿ ”ತುಳುನಾಡ ದೈವಗಳು” ಪುಸ್ತಕದ ಲೇಖಕರ ವಾಟ್ಸಾಪ್ ಗೆ ಹೋಗಬಹುದು. ಅಲ್ಲಿ ಅವರನ್ನು ಸಂಪರ್ಕಿಸಿ ನೇರವಾಗಿ ಲೇಖಕರಿಂದಲೇ ಪುಸ್ತಕವನ್ನು ಪಡೆಯಬಹುದು.