ಪುತ್ತೂರು ಉಮೇಶ್ ನಾಯಕ್ ಪರಿಚಯ
ಪುತ್ತೂರಿನ ಯುವ ಸಾಹಿತಿ, ಗ್ರಾಮ ಸಾಹಿತ್ಯದ ರೂವಾರಿ, ಜಾದೂಗಾರ ಪುತ್ತೂರು ಉಮೇಶ್ ನಾಯಕ್ ರವರು ಸಾಹಿತ್ಯ ಸೇವೆ, ಸಮಾಜ ಸೇವೆ, ಸಂಘ ಸಂಸ್ಥೆಗಳು, ಹೀಗೆ ಸದಾ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ಗುರುತಿಸಿಕೊಳ್ಳುತ್ತಿರುವ ಒಬ್ಬ ಚತುರ ಸಂಘಟನಾಕಾರನೂ ಹೌದು. ಆಗಷ್ಟ್ 31, 1973 ರಂದು ಪುತ್ತೂರಿನ ಶ್ರೀ ಜಗನ್ನಾಥ ನಾಯಕ್ ಮತ್ತು ಶ್ರೀಮತಿ ಜಯ ನಾಯಕ್ ದಂಪತಿಗಳ ಪುತ್ರನಾಗಿ ಜನಿಸಿದ ಉಮೇಶ್ ನಾಯಕ್ ಅವರು ಹುಟ್ಟಿ ಬೆಳೆದದ್ದು ಪುತ್ತೂರಿನ ದರ್ಬೆ ಎಂಬಲ್ಲಿ. ಶಾಲಾ ದಿನಗಳಿಂದಲೇ ಕಲೆ ಸಾಹಿತ್ಯ ಸಮಾಜ ಸೇವೆ …