ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಮತ್ತು ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಹಾಗೂ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ಕವಯತ್ರಿ ಪ್ರಿಯಾ ಸುಳ್ಯ ರವರ ”ಬಾಳಿಗೆ ಬೆಳಕು” ಕವನ ಸಂಕಲನ ಬಿಡುಗಡೆ ಸಮಾರಂಭ ಕಾರ್ಯಕ್ರಮವು ದಿನಾಂಕ 25.02.2024 ಆದಿತ್ಯವಾರ ದಂದು ಬೆಳಗ್ಗೆ 9.30 ಕ್ಕೆ ಪುತ್ತೂರಿನ ಮನಿಷಾ ಸಭಾಂಗಣದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ ಸಾ ಪ ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಪುತ್ತೂರು ಉಮೇಶ್ ನಾಯಕ್ ವಹಿಸಲಿದ್ದು, ಖ್ಯಾತ ಸಾಹಿತಿಗಳು, ವಿಮರ್ಶಕರೂ ಹಾಗೂ ನ್ಯಾಯವಾದಿಗಳಾದ ಶ್ರೀ ಭಾಸ್ಕರ ಕೊಡಿoಬಾಳ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಪ್ರಿಯಾ ಸುಳ್ಯ ಅವರ ಕವನ ಸಂಕಲನವನ್ನು ವಿಶೇಷವಾಗಿ ಎಂಟನೇ ಕ್ಲಾಸ್ ನ ಒಬ್ಬಳು ವಿದ್ಯಾರ್ಥಿನಿಯ ಕೈಯಲ್ಲಿ ಬಿಡುಗಡೆ ಮಾಡುವ ಯೋಜನೆಯನ್ನು ಆಯೋಜಕರು ಮಾಡಿದ್ದಾರೆ.
ಕವನ ಸಂಕಲನ ಬಿಡುಗಡೆಯ ನಂತರ ಬೆಳಗ್ಗೆ 11.30ಕ್ಕೆ ಆಹ್ವಾನಿತ ಕವಿಗಳಿಂದ ಕವಿಗೋಷ್ಠಿ ನಡೆಯಲಿದ್ದು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಸುಪ್ರಿತಾ ಚರಣ್ ಪಾಲಪ್ಪೆ ಕಡಬ ವಹಿಸಲಿದ್ದಾರೆ. ಎಲ್ಲಾ ಸಾಹಿತ್ಯ ಮಿತ್ರರನ್ನು ಕವಿಗಳನ್ನು ಸಾಹಿತ್ಯ ಪೋಷಕರನ್ನು ಆತ್ಮೀಯವಾಗಿ ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.