ದ ಕ ಜಿಲ್ಲಾ ಕ.ಸಾ.ಪ ‘ಶಾಸನ-ಶೋಧನ-ಅಧ್ಯಯನ-ಸಂರಕ್ಷಣಾ’ ಯೋಜನೆ -4

ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಮುದ್ಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ 17ನೇ ಶತಮಾನದ ಪುರಾತನ ಶಾಸನ ಅಧ್ಯಯನ ಹಾಗೂ 16 ನೇ ಶತಮಾನದ ವಿಗ್ರಹ ಪತ್ತೆ ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ವತಿಯಿಂದ ನಡೆಸುವಂತಹ ‘ಶಾಸನ-ಶೋಧನ-ಅಧ್ಯಯನ-ಸಂರಕ್ಷಣಾ’ ಯೋಜನೆಯಡಿಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಮುದ್ಯ ಎಂಬಲ್ಲಿ ಇರುವ ಪುರಾತನ ಪಾರ್ವತಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಲಭ್ಯವಾದ ಸುಮಾರು 302 ವರ್ಷ ಪುರಾತನ 17ನೇ ಶತಮಾನದ ಕನ್ನಡ …

Read more

ಕನ್ನಡ ವಿಷಯದಲ್ಲಿ 100% ಅಂಕ ಪಡೆದ ವಿದ್ಯಾರ್ಥಿಗಳಿಗೆ ‘ಕನ್ನಡ ಪ್ರತಿಭೆ ಪ್ರಶಸ್ತಿ’ ಪುರಸ್ಕಾರ

2023 – 2024 ಶೈಕ್ಷಣಿಕ ವರ್ಷದಲ್ಲಿ ಕನ್ನಡವನ್ನು ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡು ಕನ್ನಡ ವಿಷಯದಲ್ಲಿ 100% ಅಂಕ ಪಡೆದ 19 ವಿದ್ಯಾರ್ಥಿಗಳು ಹಾಗೂ 86 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 105 ವಿದ್ಯಾರ್ಥಿಗಳಿಗೆ ಹಾಗೂ 10ನೇ ತರಗತಿಯಲ್ಲಿ 615 ರ ಮೇಲ್ಪಟ್ಟು ಅಂಕ ಪಡೆದ 10 ವಿದ್ಯಾರ್ಥಿಗಳಿಗೂ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ‘ಕನ್ನಡ ಪ್ರತಿಭೆ ಪ್ರಶಸ್ತಿ‘ ಪುರಸ್ಕಾರ ಸಮಾರಂಭವು 15-06-2024 ರ ಶನಿವಾರ ಮಧ್ಯಾಹ್ನ 2:30 ಗಂಟೆಗೆ ಸರಿಯಾಗಿ …

Read more

ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಸೇವಕಿ ಕು. ಸೌಜನ್ಯ. ಬಿ.ಎಂ ರವರಿಗೆ ಕನ್ನಡ ಎಂ. ಎ. ಪ್ರಥಮ ರಾಂಕ್

ಕುಮಾರಿ ಸೌಜನ್ಯ ಬಿ.ಎಂ ರವರು ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ವಿಭಾಗದ ಹೆಮ್ಮೆಯ ವಿದ್ಯಾರ್ಥಿನಿಯಾಗಿದ್ದು ಕನ್ನಡ ಎಂ. ಎ. ಯಲ್ಲಿ ಪ್ರಥಮ ರಾಂಕ್ ಜಿಲ್ಲೆಗೆ ತಂದು ಅಪೂರ್ವ ಸಾಧನೆಯನ್ನು ಮಾಡಿದ ಹೆಗ್ಗಳಿಕೆ . 2023-24ನೇ ಶೈಕ್ಷಣಿಕ ಸಾಲಿನಲ್ಲಿ ಈ ವಿಶೇಷ ಸಾಧನೆ ಮಾಡಿದ ಹೆಮ್ಮೆಯ ಸೌಜನ್ಯ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಮಾಡಾವು ಶ್ರೀ ಬಾಬು ಎಂ ಮತ್ತು ಶ್ರೀಮತಿ ಸುಂದರಿ ಬಿ ಎಂ ಇವರ ಪ್ರೀತಿಯ ಪುತ್ರಿ. ಪಠ್ಯದ ಜೊತೆಗೆ ಸಾಹಿತ್ಯ ಮತ್ತು ಪತ್ರಿಕೋದ್ಯಮ …

Read more

ದ ಕ ಜಿಲ್ಲಾ ಕ.ಸಾ.ಪ ದಿಂದ ‘ಶಾಸನ ಶೋಧನ ಅಧ್ಯಯನ ಸಂರಕ್ಷಣಾ ‘ಯೋಜನೆ-3

ಬರೆಪ್ಪಾಡಿ ಯಲ್ಲಿ ಹೊಯ್ಸಳ ಕಾಲದ  800 ವರ್ಷ ಹಿಂದಿನ ವಿಗ್ರಹಗಳು ಪತ್ತೆ ಹಾಗೂ 584 ವರ್ಷ ಹಿಂದಿನ ಕನ್ನಡ ಶಾಸನದ ಅಧ್ಯಯನ ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆಯ  ಕುದ್ಮಾರ್ ಗ್ರಾಮದ ಬರೆಪ್ಪಾಡಿ ಎಂಬಲ್ಲಿ  ಶ್ರೀ ಪಂಚಲಿಂಗೇಶ್ವರ – ಕೇಪುಳೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ಜೀರ್ಣೋದ್ಧಾರದ ಸಂದರ್ಭದಲ್ಲಿ ಹಾಗೂ ದೇವರ ತೀರ್ಥದ ಬಾವಿಯನ್ನು  ಸ್ವಚ್ಛಗೊಳಿಸುವ ಸಂದರ್ಭದಲ್ಲಿ  ಸುಮಾರು 800 ವರ್ಷ ಹಳೆಯದು ಎನ್ನಲಾದ ಹೊಯ್ಸಳ ಕಾಲದ  ಸುಮಾರು 9 ಲೋಹದ ವಿಗ್ರಹಗಳು ಪತ್ತೆಯಾಗಿದೆ. ಜೊತೆಗೆ ದೇವಸ್ಥಾನದ ಒಳ ಆವರಣದದಲ್ಲಿ ಸುಮಾರು …

Read more

ಪುತ್ತೂರಿನ ಲ್ಯಾಡರ್ ಮ್ಯಾನ್ – ದೂರ ದೃಷ್ಟಿಯುಳ್ಳ  ಸಾಧಕನ ಯಶೋಗಾಥೆ ಹಾಗೂ ಬದುಕು ಬದಲಿಸಬಲ್ಲ ಪ್ರೇರಕ ಮಾತುಗಳು

ಸಾಹಿತ್ಯ ಪೋಷಕರಾಗಿರುವ  ಪುತ್ತೂರಿನ ಶ್ರೀ ಕೇಶವ್ ಅಮೈ ಅವರ ಮಾಲಕತ್ವದ ಎಸ್. ಆರ್ ಕೆ ಲ್ಯಾಡರ್ಸ್, ಇಂದು ತನ್ನನ್ನು ಕಳೆದ 25 ವರ್ಷಗಳಿಂದ  ಬೆಳೆಸಿದ ತನ್ನ ಗ್ರಾಹಕರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಮತ್ತು ಹಿತೈಷಿಗಳಿಗೆ  ಧನ್ಯವಾದ ಸಮರ್ಪಿಸುವ  ನಿಟ್ಟಿನಲ್ಲಿ ರಜತ ಮಹೋತ್ಸವ ಸಮಾರಂಭವನ್ನು  ಅತ್ಯಂತ ವಿಜೃಂಭಣೆ ಹಾಗೂ  ಧನ್ಯತಾ ಭಾವದಿಂದ ಆಚರಿಸಿಕೊಂಡಿದೆ. ಈ ಸಂದರ್ಭದಲ್ಲಿ ಸಂಸ್ಥೆಗೆ ಹಾಗೂ ಕೇಶವ ಅವರಿಗೆ ಶುಭ ಹಾರೈಸುತ್ತಾ…ಅವರ ಬಗ್ಗೆ ನನ್ನ ಅನುಭವಕ್ಕೆ ಬಂದ ಒಂದೆರಡು ಮಾತುಗಳು….. 2023 ಡಿಸೆಂಬರ್ 3ರಂದು ವಿಶ್ವ …

Read more

800 ವರ್ಷ ಹಿಂದಿನ ಕನ್ನಡ ಶಾಸನ ಪತ್ತೆ

ದ ಕ ಜಿಲ್ಲಾ ಕ.ಸಾ.ಪ – “ಶಾಸನ -ಶೋಧನ- ಅಧ್ಯಯನ- ಸಂರಕ್ಷಣಾ” ಯೋಜನೆ -2 ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ದೋಂತಿಲ ಎಂಬಲ್ಲಿ ಶ್ರೀ ಮಹಾವಿಷ್ಣು ಸುಬ್ರಮಣ್ಯೇಶ್ವರ ದೇವಸ್ಥಾನದಲ್ಲಿ ಸುಮಾರು 800 ವರ್ಷ ಹಳೆಯದಾದ ಕನ್ನಡ ಶಿಲಾ ಶಾಸನವೊಂದು ಇತ್ತೀಚಿಗೆ ಪತ್ತೆಯಾಗಿದೆ. ದ. ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ನಡೆಸಲ್ಪಡುವ “ಶಾಸನ -ಶೋಧನ- ಅಧ್ಯಯನ- ಸಂರಕ್ಷಣಾ” ಯೋಜನೆಯಡಿಯಲ್ಲಿ ಯೋಜನೆಯ ಪ್ರಮುಖ ಅಧ್ಯಯನಕಾರರಾದ ಇತಿಹಾಸ ತಜ್ಞರಾದ ಡಾ. ಉಮಾನಾಥ ಶೆಣೈ ವೈ, …

Read more

ದತ್ತಿ ನಿಧಿ ಪುಸ್ತಕ ಪ್ರಶಸ್ತಿ ಪುರಸ್ಕಾರಕ್ಕೆ ಅರ್ಜಿಯನ್ನು ಆಹ್ವಾನ

ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಇರುವ ವಿವಿಧ ಪ್ರಕಾರಗಳ ದತ್ತಿ ನಿಧಿ ಪುಸ್ತಕ ಪ್ರಶಸ್ತಿ ಪುರಸ್ಕಾರಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಸುಮಾರು 53 ವಿವಿಧ ಪ್ರಕಾರಗಳ ಪ್ರಶಸ್ತಿಯ ವಿವರಗಳನ್ನು ಇಲ್ಲಿ ಕೊಟ್ಟಿರುವ ಪಿಡಿಎಫ್ ನಲ್ಲಿ ಉಲ್ಲೇಖಿಸಲಾಗಿದೆ. ಪಟ್ಟಿಯನ್ನು ಗಮನವಿಟ್ಟು ಓದಿ ಅರ್ಥೈಸಿಕೊಳ್ಳಿ , ಬಳಿಕ ನೀವು ರಚಿಸಿದ ಕೃತಿಯು ಈ ಪಟ್ಟಿಯಲ್ಲಿ ಯಾವ ಪ್ರಕಾರದ ಪ್ರಶಸ್ತಿಗೆ ಸೂಕ್ತವಾಗುತ್ತದೆ ಎಂದು ಸರಿಯಾಗಿ ತಿಳಿದು ಪ್ರಶಸ್ತಿ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಿ. ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ನಿಯಮವನ್ನು ಕೊನೆಗೆ ತಿಳಿಸಲಾಗಿದೆ. ಅರ್ಜಿ ಸಲ್ಲಿಸಲು …

Read more

ಶ್ರೀ ದರ್ಶನ ಗರ್ತಿಕೆರೆ- ಪುತ್ತೂರು, ದ ಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿಗೆ ಆಯ್ಕೆ

ಪುತ್ತೂರು, ಮಾರ್ಚ್ 23 ಹಾಗೂ 24ರಂದು ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆಯುವ ದ. ಕ ಜಿಲ್ಲಾ 26ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಶಸ್ತಿಗೆ ಪುತ್ತೂರಿನ ವಿವೇಕಾನಂದ ಐ.ಎ.ಎಸ್ ಅಧ್ಯಯನ ಕೇಂದ್ರದ ತಜ್ಞ ತರಬೇತುದಾರರಾದ ಶ್ರೀ ದರ್ಶನ್ ಗರ್ತಿಕೆರೆ ಅವರು ಆಯ್ಕೆಗೊಂಡಿರುತ್ತಾರೆ. ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಮೋಹನ್ ಆಳ್ವ ಅವರು ಇವರನ್ನು ಅಭಿನಂದಿಸಲಿದ್ದಾರೆ. ಇವರು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿವೇಕಾನಂದ ಐ.ಎ.ಎಸ್ ಅಧ್ಯಯನ ಕೇಂದ್ರ ದ ವತಿಯಿಂದ …

Read more

ನಡೆದಾಡುವ ವಿಶ್ವಕೋಶ ಶಿವರಾಮ ಕಾರಂತ ಜೀವನ ಚರಿತ್ರೆ

ಕೋಟಾ ಶಿವರಾಮ ಕಾರಂತರು ಯಾರಿಗೆ ಗೊತ್ತಿಲ್ಲ ಹೇಳಿ. ಮಕ್ಕಳಿಂದ ಹಿಡಿದು ಹಿರಿಯರ ತನಕವೂ ಕಾರಂತರ ಹೆಸರು ಹಸಿರು. “ಕಡಲತೀರದ ಭಾರ್ಗವ”, “ನಡೆದಾಡುವ ವಿಶ್ವಕೋಶ” ಎಂದೇ ಖ್ಯಾತರಾಗಿದ್ದ ಕಾರಂತರು ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕಾದಂಬರಿಕಾರ, ಕವಿ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರರೂ ಆಗಿದ್ದರು.  ಕಾರಂತರು ಎಲ್ಲಾ ಪ್ರಕಾರಗಳ ಸಾಹಿತ್ಯದಲ್ಲಿ ಪರಿಣಿತಿ ಹೊಂದಿದವರು. ಆಡುಮುಟ್ಟದ ಸೊಪ್ಪಿಲ್ಲ. ಎಂಬ ಗಾದೆಯಂತೆ, ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲ ಎಂದು ಹೇಳಲಾಗುತ್ತದೆ. ಕಾರಂತರು ಯಾವುದೇ ವಿಶ್ವ ವಿದ್ಯಾನಿಲಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ …

Read more