ಪುತ್ತೂರಿನಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸುಮಾರು 50 ನಿವೃತ್ತ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು

ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಪುತ್ತೂರು ಇದರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಹಾಗೂ ರೋಟರಿ ಕ್ಲಬ್ ಪುತ್ತೂರು ಪೂರ್ವ ಇದರ ಸಹಭಾಗಿತ್ವದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸುಮಾರು 50 ನಿವೃತ್ತ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮವು ಪುತ್ತೂರಿನ ರೋಟರಿ ಮನಿಷಾ ಸಭಾಂಗಣದಲ್ಲಿ ದಿನಾಂಕ 5-9-2024 ರಂದು ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ವಾಲ್ಟರ್ ಹೆಚ್ ಡಿಮೆಲ್ಲೋ, ನಿವೃತ್ತ ವಿಭಾಗೀಯ ಸಹ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ …

Read more

ಶಿಕ್ಷಕರ ದಿನಾಚರಣೆ, ಸೇವಾ ನಿವೃತ್ತರ ಸಮಾಗಮ – ಅಭಿನಂದನಾ ಕಾರ್ಯಕ್ರಮ

ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತ. ಈ ಕಾರ್ಯಕ್ರಮ ದಲ್ಲಿ ಸುಮಾರು 75 ನಿವೃತ್ತ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.

‘ನನ್ನೂರಿನಲ್ಲಿ ನಾ ಕಂಡ ವಿಶೇಷತೆ’ – ಕನ್ನಡ ಸಾಹಿತ್ಯ ಪರಿಷತ್ತು ಉಪ್ಪಿನಂಗಡಿ ಹೋಬಳಿ ಘಟಕದ ವಿನೂತನ ಕಾರ್ಯಕ್ರಮ

ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಉಪ್ಪಿನಂಗಡಿ ಹೋಬಳಿ ಘಟಕದ ವತಿಯಿಂದ ವಿದ್ಯಾರ್ಥಿಗಳನ್ನು ಸಾಹಿತ್ಯ ಕ್ಷೇತ್ರದತ್ತ ಬರಮಾಡಿಕೊಳ್ಳುವ ನಿಟ್ಟಿನಲ್ಲಿ ವಿನೂತನ ಕಾರ್ಯಕ್ರಮ ‘ನನ್ನೂರಿನಲ್ಲಿ ನಾ ಕಂಡ ವಿಶೇಷತೆ’ ವಿದ್ಯಾರ್ಥಿಗಳಿಗೆ ಬರವಣಿಗೆ ಪ್ರೋತ್ಸಾಹ ನೀಡುವ ಜೊತೆಗೆ ಊರಿನ ವಿಶೇಷತೆಗಳ ಅನಾವರಣ.. ಯೋಜನೆಯನ್ನು ಹಮ್ಮಿಕೊಂಡ ಉಪ್ಪಿನಂಗಡಿ ಹೋಬಳಿ ಘಟಕದ ಅಧ್ಯಕ್ಷರಾದ ಶ್ರೀ ಕರುಣಾಕರ ಸುವರ್ಣ ಹಾಗೂ ಕಾರ್ಯದರ್ಶಿಗಳಾದ ಉದಯ್ ಕುಮಾರ್ ಹಾಗೂ ಸರ್ವ ಪದಾಧಿಕಾರಿಗಳಿಗೆ ಅಭಿನಂದನೆಗಳು.

ದಿವಂಗತ ಗಂಗಾಧರ ಬೆಳ್ಳಾರೆ ಮಾತಿನ ಬೆಳಕು ಒಂದು ದಿನದ ಕಾರ್ಯಗಾರ ಹಾಗೂ ಲೇಖನ ಸ್ಪರ್ಧೆ

ಪುತ್ತೂರು, ವರ್ತನಾ ವಿಶ್ಲೇಷಕ, ಆಪ್ತ ಸಲಹೆಗಾರ,ಸಾಹಿತಿಗಳಾದ  ದಿವಂಗತ ಗಂಗಾಧರ ಬೆಳ್ಳಾರೆ ಅವರನ್ನು ನೆನಪಿಸುವ ಸಲುವಾಗಿ ದಿನಾಂಕ 21-07-2024 ರ ಆದಿತ್ಯವಾರದಂದು ನಾಡಿನ ಖ್ಯಾತ ವರ್ತನಾ ವಿಶ್ಲೇಷಕರು, ಆಪ್ತ ಸಲಹೆಗಾರರು, ಚಿಂತಕರಿಂದ ಗಂಗಾಧರ ಬೆಳ್ಳಾರೆ ಮಾತಿನ ಬೆಳಕು ಎಂಬ ಒಂದು ದಿನದ ಕಾರ್ಯಗಾರವನ್ನು ಪುತ್ತೂರಿನಲ್ಲಿ  ಹಮ್ಮಿಕೊಳ್ಳಲಾಗಿದೆ. ಈ ಒಂದು ದಿನದ ಕಾರ್ಯದಲ್ಲಿ ಗಂಗಾಧರ ಬೆಳ್ಳಾರೆ ಅವರ ಮಾತಿನ ಹಾಗೂ ಬರೆಹದ ಅಭಿಮಾನಿಗಳು, ಅವರ ಶಿಷ್ಯ ವರ್ಗ, ಅವರಿಂದ ಉಪ ಕೃತರಾದವರು ಭಾಗವಹಿಸಬಹುದಾಗಿದೆ. ಪ್ರವೇಶ ಉಚಿತ, ನೊಂದಣಿ ಖಡ್ಡಾಯವಾಗಿದೆ. ಕಾರ್ಯಗಾರದಲ್ಲಿ …

Read more

ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ  – 105 ವಿದ್ಯಾರ್ಥಿಗಳಿಗೆ ಕನ್ನಡ ಪ್ರತಿಭೆ ಪ್ರಶಸ್ತಿ ಪ್ರಧಾನ

ಪುತ್ತೂರು ತಾಲೂಕಿನಿಂದ  ಹೆಚ್ಚಿನ ಸಂಖ್ಯೆಯಲ್ಲಿ ಐ.ಎ.ಎಸ್ ಅಧಿಕಾರಿಗಳಾಗಬೇಕು –  ಶಾಸಕ ಅಶೋಕ್ ಕುಮಾರ್ ರೈ ಪುತ್ತೂರು: 2023-2024 ಶೈಕ್ಷಣಿಕ ವರ್ಷದಲ್ಲಿ ಕನ್ನಡವನ್ನು ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡು ಕನ್ನಡ ವಿಷಯದಲ್ಲಿ ಶೇ.100 ಅಂಕ ಪಡೆದ ಒಟ್ಟು 105 ವಿದ್ಯಾರ್ಥಿಗಳಿಗೆ ಹಾಗೂ 10ನೇ ತರಗತಿಯಲ್ಲಿ 615ಕ್ಕಿಂತ ಹೆಚ್ಚು ಅಂಕ ಪಡೆದ 11 ವಿದ್ಯಾರ್ಥಿಗಳನ್ನು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ  ‘ಕನ್ನಡ ಪ್ರತಿಭೆ ಪ್ರಶಸ್ತಿ’ ಪುರಸ್ಕಾರ ನೀಡಿ  ಜೂ. 15ರಂದು ತೆಂಕಿಲ ನರೇಂದ್ರ …

Read more

ಪುತ್ತೂರಿನ ಅನುರಾಗ ವಠಾರದಲ್ಲಿ ಶ್ರೀ ಜನಾರ್ದನದುರ್ಗ ಅವರ ‘ಶಾಂತೇಶ್ವರನ ವಚನಗಳು’ ಕೃತಿ ಲೋಕಾರ್ಪಣೆ ಮತ್ತು ಕವಿಗೋಷ್ಠಿ

ದಕ್ಷಿಣ ಕನ್ನಡ ಜಿಲ್ಲಾ ಕ ಸಾ ಪ ಪುತ್ತೂರು ತಾಲೂಕು ಘಟಕದ ವತಿಯಿಂದ ದಿನಾಂಕ 27.5.2024 ರಂದು ಸೋಮವಾರ ಪುತ್ತೂರಿನ ಅನುರಾಗ ವಠಾರದಲ್ಲಿ ಶ್ರೀ ಜನಾರ್ದನದುರ್ಗ ಅವರ ‘ಶಾಂತೇಶ್ವರನ ವಚನಗಳು’ ಕೃತಿ ಲೋಕಾರ್ಪಣೆ ಮತ್ತು ಕವಿಗೋಷ್ಠಿ. ಪ್ರಸ್ತುತ  ಪುತ್ತೂರು, ಹಾರಾಡಿ ಯ   ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಉದಯೋನ್ಮುಖ ಯುವ  ಸಾಹಿತಿ ಶ್ರೀ ಜನಾರ್ಧನ ದುರ್ಗ  ಇವರು ವೃತ್ತಿಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾದರೂ, ಪ್ರವೃತ್ತಿಯಲ್ಲಿ  ಕನ್ನಡ ಭಾಷಾ ಕವಿಗಳು, ಅಪ್ಪಟ …

Read more

ಕ ಸಾ ಪ-ಪುತ್ತೂರು ನಿಡ್ಪಳ್ಳಿ ಗ್ರಾಮ ಸಾಹಿತ್ಯ ಸಂಭ್ರಮ- ಗ್ರಾಮೀಣ ಮಕ್ಕಳಲ್ಲಿ ಓದುವಿಕೆ ಮತ್ತು ಸಾಹಿತ್ಯದ ಕಡೆಗೆ ಒಲವು ಮೂಡಿಸುವ ಸ್ತುತ್ಯಾರ್ಹ ಕಾರ್ಯಕ್ರಮ:ಶ್ರೀ. ಬಿ. ವೆಂಕಟರಮಣ ಬೋರ್ಕರ್.

ಕ ಸಾ ಪ ಪುತ್ತೂರು ನಿಡ್ಪಳ್ಳಿ ಗ್ರಾಮ ಸಾಹಿತ್ಯ ಸಂಭ್ರಮ ಪುತ್ತೂರು,ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ನೇತೃತ್ವದಲ್ಲಿ, ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಗ್ರಾಮ ಪಂಚಾಯತ್ ನಿಡ್ಪಳ್ಳಿ ಸಹಕಾರದಲ್ಲಿ, ಮಿತ್ರಂಪಾಡಿ ಜಯರಾಮ ರೈ ಅಬುದಾಬಿ ಪೋಷಕತ್ವದಲ್ಲಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನದಂಗವಾಗಿ ಗ್ರಾಮ ಸಾಹಿತ್ಯ ಸಂಭ್ರಮ ಸರಣಿ ಕಾರ್ಯಕ್ರಮ 13, ಸಮುದಾಯ ಭವನ ನಿಡ್ಪಳ್ಳಿಯಲ್ಲಿ ದಿನಾಂಕ :24-2-2024 ರಂದು ಸಭಾ ಕಾರ್ಯಕ್ರಮ ಉದ್ಘಾಟಿಸಿ “ಗ್ರಾಮೀಣ ಮಕ್ಕಳಲ್ಲಿ ಓದುವಿಕೆ ಮತ್ತು ಸಾಹಿತ್ಯದ …

Read more

ಜಯಪ್ರಕಾಶ್ ಪುತ್ತೂರು ಅವರ ಕೃತಿ ”ದಶಕಗಳ ಸಾಹಿತ್ಯದ ಮೊಗಸಾಲೆಯಲ್ಲಿ” ಲೋಕಾರ್ಪಣೆ

ಶ್ರೀ ಜಯಪ್ರಕಾಶ್ ಪುತ್ತೂರು ಅವರು ಮೂಲತಃ ದರ್ಬೆ ನಿವಾಸಿಯಾಗಿದ್ದು, ಪ್ರಸ್ತುತ ಮೈಸೂರಿನಲ್ಲಿ ವಾಸವಾಗಿದ್ದಾರೆ. ಇವರು ಭಾರತದ ರಾಷ್ಟ್ರಪತಿಗಳಾದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಪಿ.ಆರ್. ಓ ಆಗಿ ಸೇವೆ ಸಲ್ಲಿಸಿದ್ದು, ಮೂವರು ಕೇಂದ್ರ ರಕ್ಷಣಾ ಸಚಿವರ ಸಮನ್ವಯ ಅಧಿಕಾರಿಯಾಗಿ ಸೇವೆಯನ್ನು ಸಲ್ಲಿಸಿ, ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನದ ವಿನ್ಯಾಸ ಹಾಗೂ ಅಭಿವೃದ್ಧಿ ಕೇಂದ್ರದ ಪ್ರಧಾನ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಸೇವೆಯನ್ನು ಸಲ್ಲಿಸಿ, ಡಿ ಆರ್ ಡಿ ಓ ಸಂಸ್ಥೆಯ ಪ್ರಾದೇಶಿಕ ಪಿ.ಆರ್.ಓ ಆಗಿ ಸೇವೆಯನ್ನು ಸಲ್ಲಿಸಿರುವ …

Read more

ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸ್ಥಳೀಯ ಸಾಧಕರಿಗೆ ಸನ್ಮಾನ ಸಾಧಕರ ಅಭಿನಂದನಾ ಕಾರ್ಯಕ್ರಮ

ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸ್ಥಳೀಯ ಸಾಧಕರಿಗೆ ಸನ್ಮಾನ ಸಾಧಕರ ಅಭಿನಂದನಾ ಕಾರ್ಯಕ್ರಮ. ಸ್ಥಳೀಯ ಸಾಧಕರಿಗೆ ಸನ್ಮಾನ ಸಾಧಕರ ಅಭಿನಂದನಾ ಕಾರ್ಯಕ್ರಮದಲ್ಲಿ ಶಾಸನ ಅಧ್ಯಯನಕಾರರಾದ ಶ್ರೀ ಉಮಾನಾಥ್ ಶೆಣೈ, ಸಾಹಿತಿ ಶಿಕ್ಷಕಿ ಶಾಂತಾ ಪುತ್ತೂರು, ಸಂಗೀತ ಕಲಾವಿದರಾದ ಮಿಥುನ್ ರಾಜ್ ವಿದ್ಯಾಪುರ, ಡಾ.ಶ್ರೀಶಭಟ್ ಸ್ಥಾಪಕಾಧ್ಯಕ್ಷರು ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ (ರಿ), ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಶ್ರೀಮತಿ ಪ್ರೇಮಲತಾ ಎಂ,ಶ್ರೀಮತಿ ಸುಲೋಚನಾ ಕೆ ರವರನ್ನು ಸ್ಥಳೀಯ ಸಾಧಕರ ನೆಲೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು

ಕಬಕ ಗ್ರಾಮದಲ್ಲಿ ಸಾಹಿತ್ಯ ಸಂಭ್ರಮ ಸ್ಥಳೀಯ ಪ್ರತಿಭೆಗಳಿಗೆ ಮತ್ತು ಸಾಧಕರಿಗೆ ಅವಕಾಶ

ಪುತ್ತೂರು : ವರ್ಷದಲ್ಲಿ ಒಂದು ಬಾರಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ತಾಲೂಕಿನಲ್ಲಿರುವ ಎಲ್ಲಾ ಸಾಹಿತಿಗಳಿಗೆ ಮತ್ತು ಕಲಾವಿದರಿಗೆ ವೇದಿಕೆ ನೀಡಲು ಹಾಗೂ ಸಾಧಕರನ್ನು ಸನ್ಮಾನಿಸಲು ಕಷ್ಟ ಸಾಧ್ಯ. ಈ ನಿಟ್ಟಿನಲ್ಲಿ ಪುತ್ತೂರು ತಾಲೂಕಿನ 32 ಗ್ರಾಮದಲ್ಲೂ ತಿಂಗಳಿಗೆ ಒಂದರಂತೆ ಗ್ರಾಮ ಸಾಹಿತ್ಯ ಸಂಭ್ರಮ ಸರಣಿ ಕಾರ್ಯಕ್ರಮವನ್ನು ಏರ್ಪಡಿಸಿ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಹಾಗೂ ಸಾಧಕರನ್ನ ಗುರುತಿಸುವ ಕಾರ್ಯವನ್ನು ಹಮ್ಮಿಕೊಂಡಿದ್ದೇವೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಭಾಧ್ಯಕ್ಷತೆ ವಹಿಸಿದ ಪುತ್ತೂರು ಕಸಾಪ ಅಧ್ಯಕ್ಷರಾದ ಪುತ್ತೂರು …

Read more