ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ನೇತೃತ್ವದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಗ್ರಾಮ ಪಂಚಾಯತ್ ನಿಡ್ಪಳ್ಳಿ ಸಹಕಾರದಲ್ಲಿ ಮಿತ್ರಂಪಾಡಿ ಜಯರಾಮ ರೈ ಅಬುದಾಬಿ ಇವರ ಮಹಾಪೋಷಕತ್ವದಲ್ಲಿ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸಂಯೋಜನೆಯಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನದಂಗವಾಗಿ ಗ್ರಾಮ ಸಾಹಿತ್ಯ ಸಂಭ್ರಮ 2024 ಸರಣಿ ಕಾರ್ಯಕ್ರಮ – 13 . ಇದೇ ದಿನಾಂಕ: 24-02-2024ನೇ ಶನಿವಾರ ಬೆಳಗ್ಗೆ 10ಕ್ಕೆ ಸಮುದಾಯ ಭವನ ನಿಡ್ಪಳ್ಳಿ ಇಲ್ಲಿ ನಡೆಯಲಿದೆ.
ಈ ಕಾರ್ಯಕ್ರ ದ ಸರ್ವಾಧ್ಯಕ್ಷತೆಯನ್ನು ಕು| ರಕ್ಷಿತಾ ಬಿ. (8ನೇ ತರಗತಿ, ಸರಕಾರಿ ಪ್ರೌಢಶಾಲೆ ಬೆಟ್ಟಂಪಾಡಿ)ವಹಿಸಲಿದ್ದು, ಸಭಾಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಘಟಕದ ಅಧ್ಯಕ್ಷರಾದ ಶ್ರೀ ಪುತ್ತೂರು ಉಮೇಶ್ ನಾಯಕ್ ವಹಿಸಲಿರುವರು. ಕಾರ್ಯಕ್ರಮದ ಸರ್ವಾಧ್ಯಕ್ಷರಿಗೆ ಕನ್ನಡ ಪೇಟ ತೊಡಿಸಿ ಮೆರವಣಿಗೆ ಮೂಲಕ ವೇದಿಕೆಗೆ ಬರಮಾಡಿಕೊಳ್ಳಲಿದ್ದೇವೆ. ಕಾರ್ಯಕ್ರಮವನ್ನು ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಬಿ. ವೆಂಕಟರಮಣ ಬೋರ್ಕರ್ ಉದ್ಘಾಟನೆ ಮಾಡಲಿರುವರು.
ಮುಖ್ಯ ಅತಿಥಿಗಳಾಗಿ ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಸಂಧ್ಯಾಲಕ್ಷ್ಮಿ ,ಜಿಲ್ಲಾ ರಾಜ್ಯೋತ್ಸವಪ್ರಶಸ್ತಿ ಪುರಸ್ಕೃತ ಶ್ರೀ ರವೀಂದ್ರ ಶೆಟ್ಟಿ ನುಳಿಯಾಲು, ಕೃಷಿ ಪತ್ತಿನ ಸೇವಾ ಸಹಕಾರಿ ಸಂಘ (ನಿ )ನಿಡ್ಪಳ್ಳಿ ಇದರ ಅಧ್ಯಕ್ಷರಾದ ಶ್ರೀ ಪದ್ಮನಾಭ ಬೋರ್ಕರ್, ಬೆಟ್ಟಂಪಾಡಿ ಸಿ. ಆರ್. ಪಿ ಶ್ರೀಮತಿ ಪರಮೇಶ್ವರಿ ಪ್ರಸಾದ್, ನಿಡ್ಪಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾದ ಶ್ರೀಮತಿ ಗೀತಾ ಡಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವಿವಿಧ ಕ್ಷೇತ್ರದ ಸಾಧಕರಾದ ಡಾ ಸದಾಶಿವ ಭಟ್ ಪಳ್ಳು, ಶ್ರೀ ನುಳಿಯಾಲು ರಘುನಾಥ ರೈ, ಶ್ರೀ ಆಸೀಫ್ ತಂಬುತ್ತಡ್ಕ, ಶ್ರೀ ಜನಾರ್ಧನ ದುರ್ಗ, ಶ್ರೀಮತಿ ಭವ್ಯಾ. ಪಿ. ಆರ್. ನಿಡ್ಪಳ್ಳಿ, ಕು. ಚಿತ್ರಾ. ಎಸ್ ಮತ್ತು ಕು. ಸಮನ್ವಿ ರೈ ನುಳಿಯಾಲು ರವರನ್ನು ಪುತ್ತೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಬೋರ್ಕರ್ ಅಭಿನಂದಿಸಲಿದ್ದಾರೆ.
ನಂತರ ಸಾಹಿತ್ಯಕ್ಕೆ ನಿಡ್ಪಳ್ಳಿ ಗ್ರಾಮದ ಕೊಡುಗೆ ವಿಷಯದ ಕುರಿತು ಲೇಖಕರು, ಚಿಂತಕರು ಹಾಗೂ ವಿಮರ್ಶಕರಾದ ನುಳಿಯಾಲು ರಾಧಾಕೃಷ್ಣ ರೈ ಮಾತನಾಡಲಿರುವರು. ಕನ್ನಡದಲ್ಲೂ ಐ.ಎ.ಎಸ್ ಬರೆಯಿರಿ ಅಭಿಯಾನ. ಐಎಎಸ್, ಐಪಿಎಸ್ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿಯನ್ನು ಶ್ರೀ ಪ್ರಣವ್ ಭಟ್ ಪ್ರೇರಕ ಭಾಷಣಕಾರರು, ಕ.ಸಾ.ಪ ಪುತ್ತೂರು, ಐ.ಎ.ಎಸ್ ದರ್ಶನ ಇವರು ನೀಡಲಿದ್ದಾರೆ.
ಆ ಗ್ರಾಮದ ಶಾಲಾ ಮಕ್ಕಳಿಗೆ ಬಾಲಕವಿಗೋಷ್ಠಿ, ಬಾಲಕಥಾಗೋಷ್ಠಿ, ಪ್ರವಾಸ ಕಥನ,ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ನಂತರ ಸಮಾರೋಪ ಸಮಾರಂಭದಲ್ಲಿ ಸ. ಹಿ. ಪ್ರಾ. ಶಾಲೆ ಮುಂಡೂರು -೧ ಇದರ ವಿದ್ಯಾರ್ಥಿನಿ ಕು. ಶ್ರೀಜ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಎಲ್ಲಾ ವಿಶೇಷತೆಗಳ ಮೂಲಕ ಈ ಕಾರ್ಯಕ್ರಮ ಸಾಹಿತ್ಯ ಸಮ್ಮೇಳನದ ರೂಪ ಪಡೆದಿದೆ.
ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತ್ ಸದಸ್ಯರುಗಳು, ಗ್ರಾಮದ ವಿವಿಧ ಗಣ್ಯರು, ಗ್ರಾಮದ ಶಾಲಾ ಮುಖ್ಯಗುರುಗಳು ಶಿಕ್ಷಕವೃಂದ ಉಪಸ್ಥಿತರಿರುವರು.