ಡಾ. ಶ್ರೀಧರ ಎಚ್. ಜಿ ಪರಿಚಯ

ಡಾ. ಶ್ರೀಧರ ಎಚ್. ಜಿ. ಇವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಬರುವ ಮುಂಡಿಗೆಹಳ್ಳ ಎಂಬ ಊರಿನವರು. ಲಾಲ್ ಬಹದ್ದೂರ್ ಶಾಸ್ತಿç ಕಾಲೇಜಿನಿಂದ ಬಿ.ಎ. ಪದವಿ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿಯನ್ನು ಪ್ರಥಮ ರ‍್ಯಾಂಕ್ ಮತ್ತು ಚಿನ್ನದ ಪದಕದೊಂದಿಗೆ ೧೯೮೬ರಲ್ಲಿ ಪಡೆದುಕೊಂಡರು. ಅದೇ ವರ್ಷ (೧೯೮೬) ಯುಜಿಸಿ ನಡೆಸುವ ಜೂನಿಯರ್ ರಿಸರ್ಚ್ ಫೆಲೋಷಿಪ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಡಾ. ಟಿ.ವಿ. ವೆಂಕಟಾಚಲ ಶಾಸ್ತಿçà ಇವರ ಮಾರ್ಗದರ್ಶನದಲ್ಲಿ “ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ಧಕಲೆ” (ಕ್ರಿ.ಶ. ೪೫೦ರಿಂದ ೧೩೫೦) ಎಂಬ ವಿಷಯವನ್ನು ಕುರಿತು ಸಲ್ಲಿಸಿದ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ೧೯೯೩ರಲ್ಲಿ ಪಡೆದರು. ೧೯೮೭ರಿಂದ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ವಿಭಾಗ ಮುಖ್ಯಸ್ಥರಾಗಿ ಸೇವೆಯನ್ನು ಸಲ್ಲಿಸಿ ೨೦೨೨ರಲ್ಲಿ ವೃತ್ತಿಯಿಂದ ನಿವೃತ್ತಿಯಾಗಿದ್ದಾರೆ. ವಿವೇಕಾನಂದ ಕಾಲೇಜು (ಸ್ವಾಯತ್ತ) ಇದರ ಪರೀಕ್ಷಾಂಗ ಕುಲಸಚಿವರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Dr. Shreedhar HG Introduction

ಸಂಶೋಧನೆ, ಸಾಹಿತ್ಯ ವಿಮರ್ಶೆ, ಸಂಪಾದನೆ, ನಾಟಕ, ಕಾದಂಬರಿ, ಪಠ್ಯಪುಸ್ತಕ ರಚನೆ, ಸಂಘಟನೆಯ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಇವರು ವಿವಿಧ ವಿಚಾರಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಮಂಗಳೂರು ಮತ್ತು ಕಣ್ಣೂರು ವಿಶ್ವವಿದ್ಯಾಲಯದ ಪರೀಕ್ಷಾಮಂಡಳಿಯಲ್ಲಿ ಕೆಲಸ ಮಾಡಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಇವರ ಮಾರ್ಗದರ್ಶನದಲ್ಲಿ ನಾಲ್ಕು ಮಂದಿ ವಿದ್ಯಾರ್ಥಿಗಳು ಡಾಕ್ಟರೇಟ್ ಮತ್ತು ಒಬ್ಬರು ಎಂ.ಫಿಲ್. ಪದವಿಯನ್ನು ಪಡೆದಿದ್ದಾರೆ. ೧೫ಕ್ಕಿಂತ ಹೆಚ್ಚು ವಿಮರ್ಶೆಯ ಕೃತಿಗಳು, ೧೦ಕ್ಕಿಂತ ಹೆಚ್ಚು ಸಂಪಾದಿತ ಕೃತಿ, ೯ ಪಠ್ಯಪುಸ್ತಕ, ೧ ನಾಟಕ, ಎರಡು ಕಾದಂಬರಿಗಳನ್ನು ನೀಡಿದ್ದಾರೆ. ಇದೀಗ ಮೂರನೆಯ ಕಾದಂಬರಿ ‘ಬಯಲು – ಅಲ್ಲಮನ ಕಥನ’ ಪ್ರಕಟಣೆಗೆ ಸಿದ್ಧವಾಗಿದೆ.

ಪ್ರಸ್ಥಾನ ಕಾದಂಬರಿಗೆ ಚಡಗ ರಾಜ್ಯ ಮಟ್ಟದ ಕಾದಂಬರಿ ಪ್ರಶಸ್ತಿ – ೨೦೨೨, ಚಪಡ ಕಾದಂಬರಿಗೆ ಕಲ್ಬುರ್ಗಿಯ ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಇವರಿಂದ “ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ ೨೦೨೨ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಉ ಇವರು ನೀಡುದ ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ ೨೦೨೩ ಬಂದಿದೆ.
೨೦೦೭ರಿಂದ ೨೦೧೭ರವರೆಗೆ ಪುತ್ತೂರು ಕರ್ನಾಟಕ ಸಂಘದ ಕಾರ್ಯದರ್ಶಿ, ೨೦೧೭ರಿಂದ ೨೦೨೧ರವರೆಗೆ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಗೌರವ ಕಾರ್ಯದರ್ಶಿ, ೨೦೨೨ರ ಸೆಪ್ಟಂಬರ್‌ನಲ್ಲಿ ನಡೆದ ಪುತ್ತೂರು ತಾಲೂಕು ೨೧ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ ಗೌರವ ಇವರದಾಗಿದೆ.

Leave a comment