ಡಿಸೆಂಬರ್ 28 ಶನಿವಾರದಂದು ಕೆದಂಬಾಡಿ ಗ್ರಾಮ ಸಾಹಿತ್ಯ ಸಂಭ್ರಮ-ಸರಣಿ -19

ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ನೇತೃತ್ವದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಗ್ರಾಮ ಪಂಚಾಯತ್ ಕೆದಂಬಾಡಿ ಸಹಕಾರದೊಂದಿಗೆ,ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ, ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ ರೈ ಅಬುದಾಬಿಯವರ ಮಹಾ ಪೋಷಕತ್ವದಲ್ಲಿ,ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನದಂಗವಾಗಿ, ಕೆದಂಬಾಡಿ ಗ್ರಾಮ ಸಾಹಿತ್ಯ ಸಂಭ್ರಮ-ಸರಣಿ -19 ವು ಡಿಸೆಂಬರ್ 28 ಶನಿವಾರದಂದು ಕೆದಂಬಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.

ಯುವಜನತೆಯನ್ನು ಸಾಹಿತ್ಯ ಕ್ಷೇತ್ರದತ್ತ ಬರ ಮಾಡಿಕೊಳ್ಳುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮದಲ್ಲಿ ಸರ್ವಾಧ್ಯಕ್ಷತೆಯನ್ನು ದ. ಕ. ಜಿ. ಪಂ. ಹಿ. ಪ್ರಾ. ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಕು.ಆಯಿಷತ್ ಮುನೀಷ ವಹಿಸಲಿದ್ದು ಸಮಾರೋಪ ಭಾಷಣವನ್ನು ಕೆದಂಬಾಡಿ ಸರ್ಕಾರಿ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಕು. ಪ್ರತಿಭಾ ಇವರು ಮಾಡಲಿದ್ದಾರೆ.

ಸರ್ವಾಧ್ಯಕ್ಷರಾದ ಕು.ಆಯಿಷತ್ ಮುನೀಷ ಅವರಿಗೆ ಕನ್ನಡದ ಪೇಟ ತೊಡಿಸಿ ತಿಂಗಳಾಡಿ ಶಾಲೆಯಿಂದ ವೇದಿಕೆಯತ್ತ ಮೆರವಣಿಗೆಯಲ್ಲಿ ಕರೆತರುವುದು ವಿಶೇಷವಾಗಿದೆ. ಪುತ್ತೂರು ಉಮೇಶ್ ನಾಯಕ್ ಅವರು ಸಭಾಧ್ಯಕ್ಷತೆ ವಹಿಸಲಿದ್ದು,ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಜಾತ. ಎನ್ ಇವರು ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಿಡಿಒ ಶ್ರೀ.ಅಜಿತ್, ಸಿಆರ್‌ಪಿ ಶ್ರೀಮತಿ ಶಶಿಕಲಾ, ಮಿತ್ರಂಪಾಡಿ ಜಯಾನಂದ ರೈ, ಡಾ ಹರ್ಷಕುಮಾರ್ ರೈ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿರಲಿದ್ದಾರೆ.

ಸರಣಿ 19 ರಲ್ಲಿ ಗ್ರಾಮದ 9 ಸಾಧಕರಿಗೆ ಸನ್ಮಾನ

  • ಶ್ರೀಮತಿ ಶಾರದಾ ಭಟ್ ಕೊಡೆಂಕಿರಿ (ಪುಸ್ತಕ ಪರಿಚಾರಿಕೆ ಮತ್ತು ಸಾಹಿತ್ಯ )
  • ಶ್ರೀ. ಕರುಣಾಕರ. ಸಿ. ಎಚ್(ಪತ್ರಕರ್ತರು, ಮಾಧ್ಯಮ ಕ್ಷೇತ್ರ )
  • ಶ್ರೀ.ಅರುಣ್ ಕುಮಾರ್ ಆಳ್ವ ಬೋಳೋಡಿ(ಕೃಷಿ ಕ್ಷೇತ್ರ )
  • ಶ್ರೀ. ಸಿ. ಶೇ. ಕಜೆಮಾರ್( ಸಾಹಿತ್ಯ ಮತ್ತು ಪತ್ರಿಕೋದ್ಯಮ)
  • ಶ್ರೀ.ಚಂದ್ರ. ಐ(ದೈವ ನರ್ತಕರು )
  • ಶ್ರೀ. ರವಿರಾಮ್ ಭಟ್ ಸನ್ಯಾಸಿಗುಡ್ಡೆ(ನಾಟಿ ವೈದ್ಯರು) *
  • ಡಾ.ರಾಜಾರಾಮ್ ಚಡಗ( ವೈದ್ಯಕೀಯ )
  • ಶ್ರೀಮತಿ ಪುಷ್ಪ ಬೋಳೋಡಿ(ಸ್ವಚ್ಛತಾ ಕಾರ್ಯಕರ್ತರು)
  • ವೀಣಾ ಬಲ್ಲಾಳ್ ಬೀಡು (ಹೈನುಗಾರಿಕೆ)

ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಹೋಬಳಿ ಘಟಕದ ಅಧ್ಯಕ್ಷರಾದ ಶ್ರೀ.ಕಡಮಜಲು ಸುಭಾಸ್. ರೈ ಅವರು ಈ ಸಾಧಕರನ್ನು ಅಭಿನಂದಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಬಾಲಕವಿಗೋಷ್ಠಿ, ಬಾಲಕಥಾಗೋಷ್ಠಿ, ಪ್ರವಾಸ ಕಥನ, ನನ್ನ ನೆಚ್ಚಿನ ಶಿಕ್ಷಕ, ನನ್ನ ಆಪ್ತಮಿತ್ರ, ಗೋಷ್ಠಿಗಳು ನಡೆಯಲಿದೆ. ವಿಶೇಷವಾಗಿ ಕನ್ನಡದಲ್ಲೂ ಐಎಎಸ್ ಬರೆಯಿರಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತಾಗಿ ಹಾಗೂ ದೇಶ ರಕ್ಷಣೆ ವೈಜ್ಞಾನಿಕ ಕ್ಷೇತ್ರ ಹಾಗೂ ತಾಂತ್ರಿಕ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳ ಕುರಿತಾಗಿ ಮಾಹಿತಿಯನ್ನು ಜಯಪ್ರಕಾಶ್ ಪುತ್ತೂರು ಅವರು ನೀಡಲಿದ್ದಾರೆ. ಮಕ್ಕಳ ಹಕ್ಕುಗಳ ಕುರಿತು ಮಾಹಿತಿಯನ್ನು ಮಹಿಳಾ ಇಲಾಖೆ ಮೇಲ್ವಿಚಾರಕಿ ಶ್ರೀಮತಿ ಆರತಿ ನೀಡಲಿದ್ದಾರೆ. ಸಾಹಿತ್ಯಸಕ್ತರಿಗೆ ಆದರದ ಸ್ವಾಗತವನ್ನು ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕರಾದ ಶ್ರೀ. ನಾರಾಯಣ ಕುಂಬ್ರ ಅವರು ತಿಳಿಸಿದ್ದಾರೆ.

Leave a comment