ಪುತ್ತೂರಿನ ಅನುರಾಗ ವಠಾರದಲ್ಲಿ ಶ್ರೀ ಜನಾರ್ದನದುರ್ಗ ಅವರ ‘ಶಾಂತೇಶ್ವರನ ವಚನಗಳು’ ಕೃತಿ ಲೋಕಾರ್ಪಣೆ ಮತ್ತು ಕವಿಗೋಷ್ಠಿ

ದಕ್ಷಿಣ ಕನ್ನಡ ಜಿಲ್ಲಾ ಕ ಸಾ ಪ ಪುತ್ತೂರು ತಾಲೂಕು ಘಟಕದ ವತಿಯಿಂದ ದಿನಾಂಕ 27.5.2024 ರಂದು ಸೋಮವಾರ ಪುತ್ತೂರಿನ ಅನುರಾಗ ವಠಾರದಲ್ಲಿ ಶ್ರೀ ಜನಾರ್ದನದುರ್ಗ ಅವರ ‘ಶಾಂತೇಶ್ವರನ ವಚನಗಳು’ ಕೃತಿ ಲೋಕಾರ್ಪಣೆ ಮತ್ತು ಕವಿಗೋಷ್ಠಿ.

ಪ್ರಸ್ತುತ  ಪುತ್ತೂರು, ಹಾರಾಡಿ ಯ   ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಉದಯೋನ್ಮುಖ ಯುವ  ಸಾಹಿತಿ ಶ್ರೀ ಜನಾರ್ಧನ ದುರ್ಗ  ಇವರು ವೃತ್ತಿಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾದರೂ, ಪ್ರವೃತ್ತಿಯಲ್ಲಿ  ಕನ್ನಡ ಭಾಷಾ ಕವಿಗಳು, ಅಪ್ಪಟ ಕನ್ನಡ ಅಭಿಮಾನಿ.

ಇವರು  ಅನೇಕ ಕವನ, ಹನಿಗವನ,  ಶಿಶು ಗೀತೆಗಳನ್ನು ರಚಿಸಿರುವ ಜೊತೆಗೆ ಅನೇಕ ಲೇಖನಗಳನ್ನೂ ಬರೆದಿದ್ದಾರೆ.  ಇವರ ಅನೇಕ ಕವನ ಹಾಗೂ  ಲೇಖನಗಳು ದಿನ ಪತ್ರಿಕೆಗಳಲ್ಲಿ ಹಾಗೂ ಮಾಸಪತ್ರಿಕೆಗಳಲ್ಲಿ ಪ್ರಕಟವಾಗಿವೆ. ತನ್ಮೂಲಕ  ಸಾಹಿತ್ಯ ಲೋಕದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ.

 ಹಳೆಗನ್ನಡ ಹಾಗೂ ವಚನ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ‘ಶಾಂತೇಶ್ವರ’ ಎಂಬ ಕಾವ್ಯನಾಮದಲ್ಲಿ 100 ವಚನಗಳಿರುವ  “ಶಾಂತೇಶ್ವರ ವಚನಗಳು” ಎಂಬ ಕೃತಿಯನ್ನು ರಚಿಸಿದ್ದು, ಈ ಕೃತಿಯು  ಪುಸ್ತಕ ಪ್ರಾಧಿಕಾರದಿಂದ ಹಸ್ತಪ್ರತಿ ಮುದ್ರಣ ಯೋಜನೆಯಲ್ಲಿ ಆಯ್ಕೆಯಾಗಿ ಪ್ರಕಟ ವಾಗುತ್ತಿರುವುದು ಬಹಳ ಸಂತೋಷದ ವಿಚಾರವಾಗಿದೆ.

 ಈ ‘ಶಾಂತೇಶ್ವರ ವಚನ’ ದಲ್ಲಿ ಆರಂಭದಲ್ಲಿ ಬರುವ ಬರೆಹಗಳು ವಚನ ಸಾಹಿತ್ಯದಂತೆ ರಚಿತವಾಗಿವೆ. ಇಲ್ಲಿ ಜಾತಿ – ಧರ್ಮದ ಬಗ್ಗೆ, ಹೊಗಳಿಕೆ – ತೆಗಳಿಕೆಯ ಬಗ್ಗೆ, ಪ್ರಕೃತಿಯ ನಿಯಮಗಳ ಬಗ್ಗೆ ಮಾತ್ರವಲ್ಲದೇ ಪ್ರಕೃತಿ ನಿಯಮದ ವಿರುದ್ಧ ಹೋಗುವವರಿಗೆ ಎಚ್ಚರಿಕೆ ಗಂಟೆಯನ್ನೂ ನೀಡಿದೆ. ಜೊತೆಗೆ ಸಮಾಜದ ಅಂಕು-ಡೊಂಕುಗಳನ್ನು ವಚನಗಳ ಮೂಲಕ ತಿಳಿಸುವ ಪ್ರಯತ್ನ  ಸ್ತುತ್ಯರ್ಹವಾಗಿದೆ.

Kasapa Puttur

ಈ ಕೃತಿಯಲ್ಲಿ ಆದಿಪ್ರಾಸಗಳನ್ನು, ಛಂದಸ್ಸಿನ ಪ್ರಯೋಗಗಳನ್ನು ಮಾಡುವುದರ ಜೊತೆಗೆ  ತಮ್ಮದೇ ಆದ ನೂತನ  ಪ್ರಯೋಗವು ಕವಿಯ ಪ್ರಯೋಗಶೀಲ ಮನಸ್ಸನ್ನು  ತೆರೆದಿರಿಸಿದೆ.

ಸಮಾಜದ ಓರೆ ಕೋರೆಗಳನ್ನು ತಿದ್ದುವ, ಅನೇಕ ವಿಚಾರಗಳಲ್ಲಿ  ಎಚ್ಚರಿಕೆಯ ಗಂಟೆಯನ್ನು ಬಾರಿಸುವ ಜೊತೆಗೆ ಉತ್ತಮ ಸಂದೇಶಗಳನ್ನು ನೀಡುವ ಈ ‘ಶಾಂತೇಶ್ವರ ವಚನಗಳು’ ಮುಂದಿನ ದಿನಗಳಲ್ಲಿ ಪಠ್ಯಪುಸ್ತಕ ಸೇರುವ ಎಲ್ಲಾ ಗುಣಲಕ್ಷಣಗಳು ಕಂಡುಬರುತ್ತಿದೆ.

ಪುಸ್ತಕ ಪ್ರಾಧಿಕಾರದಿಂದ ಮುದ್ರಣಗೊಂಡು ದಿನಾಂಕ 27 -05-2024 ಸೋಮವಾರ ದಂದು ಅನುರಾಗ ವಠಾರದಲ್ಲಿ ಲೋಕಾರ್ಪಣೆ ಗೊಳ್ಳುತ್ತಿರುವ ಬಿಡುಗಡೆಯಾಗುತ್ತಿರುವ ಈ “ಶಾಂತೇಶ್ವರ ವಚನಗಳು” ಸಾಹಿತ್ಯಾಸಕ್ತರ ಮನೆ -ಮನ ತಲುಪಲಿ ಹಾಗೂ ಇನ್ನೂ ಹೆಚ್ಚಿನ ಉತ್ತಮ ಕೃತಿಗಳು ಇವರಿಂದ ರಚನೆಯಾಗಲಿ ಎಂಬ ಆಶಯದೊಂದಿಗೆ  ಈ ಕೃತಿಗೆ ಹಾಗೂ  ಶಾಂತೇಶ್ವರ ಕವಿಗೆ ಶುಭ ಹಾರೈಸುತ್ತೇನೆ.

ಅಧ್ಯಕ್ಷರು

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು

ಪುತ್ತೂರು ತಾಲೂಕು ಘಟಕ

Leave a comment