ಖ್ಯಾತ ಸಾಹಿತಿ ಶ್ರೀಮತಿ ವೀರಮ್ಮ ಸೋಗಿ ಸಾಹಿತ್ಯ ಪರಿಷತ್ ಭೇಟಿ – ಗೌರವಾರ್ಪಣೆ

ಖ್ಯಾತ ಸಾಹಿತಿ ಶ್ರೀಮತಿ ವೀರಮ್ಮ ಸೋಗಿ ಸಾಹಿತ್ಯ ಪರಿಷತ್ ಭೇಟಿ – ಗೌರವಾರ್ಪಣೆ

ಸೋಗಿ ಕುವರಿ’ ಎಂಬ ಕಾವ್ಯನಾಮದಿಂದ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿರುವ ಶ್ರೀಮತಿ ವೀರಮ್ಮ ಸೋಗಿಯವರು ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿ, ಪ್ರವೃತ್ತಿಯಿಂದ ಕವಯಿತ್ರಿ ಪಯಣ ಎಂಬ ಕವನ ಸಂಕಲನದ ಮೂಲಕ ಸಾಹಿತ್ಯ ಕ್ಷೇತ್ರ ಪ್ರವೇಶಿಸಿದ ಇವರು ಹಲವೆಡೆ ಕವಿ ಗೋಷ್ಠಿಗಳಲ್ಲಿ ಭಾಗವಹಿಸಿರುತ್ತಾರೆ. ಸಾಹಿತ್ಯದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನ ಪಡೆದುಕೊಂಡಿದ್ದಾರೆ. 2024ನೇ ಸಾಲಿನ ಚಂದನ ಸಾಹಿತ್ಯ ವೇದಿಕೆ ಸುಳ್ಯದ ಕಡೆಯಿಂದ ಚಂದನ ರತ್ನ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

Kasapa Puttur Program

ವಿಜಯನಗರ ಜಿಲ್ಲೆಯ ಸೋಗಿ ಜನ್ಮಸ್ಥಳವಾಗಿದ್ದು 16 ವರ್ಷಗಳ ಕಾಲ ರಾಯಚೂರು ಜಿಲ್ಲಾ ಮಾನ್ವಿ ತಾಲೂಕಿನಲ್ಲಿ ಶಿಕ್ಷಕಿಯಾಗಿ ಸೇವಿಸಲ್ಲಿಸಿ ಈಗ ವಿಜಯನಗರ ಜಿಲ್ಲಾ ಕೂಡ್ಲಿಗಿ ತಾಲೂಕಿನ ಗ್ರಾಮಸಾಗರ ಹಟ್ಟಿಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಕವನ ವಾಚನಶೈಲಿ ಮತ್ತುಉಪನ್ಯಾಸದ ಶೈಲಿ ವಿಶೇಷವಾಗಿದ್ದೂ ಆಕರ್ಷಣೀಯವಾಗಿದೆ.

ಅನ್ಯಾನ್ಯ ಸಂಘ ಸಂಸ್ಥೆಗಳ ಸಹಕಾರದಲ್ಲಿ ನಡೆಸಿದ ಮುಂಗಾರು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ ಇವರು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಗೆ ಭೇಟಿ ನೀಡಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅವರನ್ನು ಸಾಹಿತ್ಯ ಪರಿಷತ್ ವತಿಯಿಂದ ಅಭಿನಂದಿಸಲಾಯಿತು.ಗ್ರಾಮ ಸಾಹಿತ್ಯ ಸಂಭ್ರಮ ಸಂಚಾಲಕರಾದ ಶ್ರೀ ನಾರಾಯಣ ಕುಂಬ್ರ ಉಪಸ್ಥಿತರಿದ್ದರು.

Leave a comment