ಡಾ. ಶ್ರೀಧರ ಎಚ್. ಜಿ ಪರಿಚಯ

ಡಾ. ಶ್ರೀಧರ ಎಚ್. ಜಿ. ಇವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಬರುವ ಮುಂಡಿಗೆಹಳ್ಳ ಎಂಬ ಊರಿನವರು. ಲಾಲ್ ಬಹದ್ದೂರ್ ಶಾಸ್ತಿç ಕಾಲೇಜಿನಿಂದ ಬಿ.ಎ. ಪದವಿ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿಯನ್ನು ಪ್ರಥಮ ರ‍್ಯಾಂಕ್ ಮತ್ತು ಚಿನ್ನದ ಪದಕದೊಂದಿಗೆ ೧೯೮೬ರಲ್ಲಿ ಪಡೆದುಕೊಂಡರು. ಅದೇ ವರ್ಷ (೧೯೮೬) ಯುಜಿಸಿ ನಡೆಸುವ ಜೂನಿಯರ್ ರಿಸರ್ಚ್ ಫೆಲೋಷಿಪ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಡಾ. ಟಿ.ವಿ. ವೆಂಕಟಾಚಲ ಶಾಸ್ತಿçà ಇವರ ಮಾರ್ಗದರ್ಶನದಲ್ಲಿ “ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ಧಕಲೆ” (ಕ್ರಿ.ಶ. ೪೫೦ರಿಂದ ೧೩೫೦) ಎಂಬ …

Read more