ಹಿರಿಯ ಸಾಹಿತಿ ಡಾ. ಅಮೃತ ಸೋಮೇಶ್ವರ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ‘ನುಡಿನಮನ’ ಕಾರ್ಯಕ್ರಮ
ಇತ್ತೀಚೆಗೆ ನಮ್ಮನ್ನಗಲಿದ ಹಿರಿಯ ಸಾಹಿತಿ ಡಾ. ಅಮೃತ ಸೋಮೇಶ್ವರ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ‘ನುಡಿನಮನ’ ಕಾರ್ಯಕ್ರಮ ಪುತ್ತೂರಿನ ರೋಟರಿ ಬ್ಲಡ್ ಬ್ಯಾಂಕಿನ ಬಳಿ ಇರುವ ಅನುರಾಗ ವಠಾರದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ದಿನಾಂಕ 13-01-2024 ರಂದು ನಡೆಯಿತು. ಅಮೃತ ಸೋಮೇಶ್ವರ ಅವರು ಬಹುಭಾಷಾ ಪಂಡಿತರು, ಅವರು ಕನ್ನಡ, ಮಲಯಾಳಂ, ತುಳು ಭಾಷೆಯಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯ, ಯಕ್ಷಗಾನ, ನಾಟಕ ರಂಗಗಳಲ್ಲಿ ಇವರ ಕೊಡುಗೆ ಅಪಾರವಾದದ್ದು. ಎಳ್ಳಷ್ಟು ಕೋಪವಿಲ್ಲದ, ಸಾಧು ಸ್ವಭಾವವನ್ನು ಅಳವಡಿಸಿಕೊಂಡ ಮಹಾನ್ …