ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಸೇವಕಿ ಕು. ಸೌಜನ್ಯ. ಬಿ.ಎಂ ರವರಿಗೆ ಕನ್ನಡ ಎಂ. ಎ. ಪ್ರಥಮ ರಾಂಕ್
ಕುಮಾರಿ ಸೌಜನ್ಯ ಬಿ.ಎಂ ರವರು ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ವಿಭಾಗದ ಹೆಮ್ಮೆಯ ವಿದ್ಯಾರ್ಥಿನಿಯಾಗಿದ್ದು ಕನ್ನಡ ಎಂ. ಎ. ಯಲ್ಲಿ ಪ್ರಥಮ ರಾಂಕ್ ಜಿಲ್ಲೆಗೆ ತಂದು ಅಪೂರ್ವ ಸಾಧನೆಯನ್ನು ಮಾಡಿದ ಹೆಗ್ಗಳಿಕೆ . 2023-24ನೇ ಶೈಕ್ಷಣಿಕ ಸಾಲಿನಲ್ಲಿ ಈ ವಿಶೇಷ ಸಾಧನೆ ಮಾಡಿದ ಹೆಮ್ಮೆಯ ಸೌಜನ್ಯ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಮಾಡಾವು ಶ್ರೀ ಬಾಬು ಎಂ ಮತ್ತು ಶ್ರೀಮತಿ ಸುಂದರಿ ಬಿ ಎಂ ಇವರ ಪ್ರೀತಿಯ ಪುತ್ರಿ. ಪಠ್ಯದ ಜೊತೆಗೆ ಸಾಹಿತ್ಯ ಮತ್ತು ಪತ್ರಿಕೋದ್ಯಮ …